ಎಲ್ಲರಿಗೂ ನಮಸ್ಕಾರ, ನೀವು ಬೆಳೆ ಪರಿಹಾರ ಜಮಾ ಆಗಿರುವ ಬಗ್ಗೆ ಮಾಹಿತಿ ತಿಳಿಯಬೇಕೆ? Bele Parihara Karnataka Status Check ಮಾಡಬೇಕಾ? ಹಾಗಿದ್ದರೆ ಈ ಲೇಖನವನ್ನು ಓದಿರಿ.
ಹೌದು ಇಗಾಗಲೆ ಅರ್ಹ ಫಲಾನುಭವಿಗಳ ಖಾತೆಗಳಿಗೆ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರದ ಹಣ ಜಮಾ ಆಗಿದೆ. ರಾಜ್ಯದ ಸುಮಾರು 34 ಲಕ್ಷ ರೈತರ ಖಾತೆಗಳಿಗೆ ಬೆಳೆ ನಷ್ಟ ಪರಿಹಾರದ ಹಣ ವರ್ಗಾವಣೆಯಾಗಿದೆ. ನಿಮಗೂ ಹಣ ಜಮಾ ಆಗಿದೆಯಾ ಚೆಕ್ ಮಾಡಿಕೊಳ್ಳಿ.
Bele Parihara Karnataka 2023-24 Payment Credited:
ಸಕಾಲಕ್ಕೆ ಬಾರದ ಮಳೆಯಿಂದ ರೈತರು ಸಂಕಷ್ಟ ಎದುರಿಸುವಂತಾಯಿತು. ಮಳೆಯ ಕೊರತೆಯಿಂದ ಬೆಳೆಗಳು ಸರಿಯಾಗಿ ಬರದೆ ಇರುವುದಕ್ಕೆ ರೈತರಿಗೆ ಬಹಳಷ್ಟು ಬೆಳೆ ನಷ್ಟವಾಗಿದೆ. ಈ ಕಾರಣಕ್ಕಾಗಿ 2024ರ ಜನವರಿಯಲ್ಲಿ ರೈತರಿಗೆ ಬೆಳೆ ಪರಿಹಾರದ ಮೊದಲನೇ ಕಂತಾಗಿ 2000 ರೂ. ಜಮಾ ಮಾಡಲಾಗಿತ್ತು.
ಈಗಾಗಲೇ ಅರ್ಹ ರೈತರ ಬ್ಯಾಂಕ್ ಖಾತೆಗೆ ಅರ್ಹತೆಗೆ ಅನುಗುಣವಾಗಿ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರದ ಹಣವನ್ನು ಪಾವತಿ ಮಾಡಲಾಗುತ್ತಿದೆ. ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿ ಆಧರಿಸಿ ಫ್ರೂಟ್ಸ್ ಐಡಿ ಹೊಂದಿರುವ, ಪಹಣಿ ಜೋಡಣೆಯಾಗಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಪರಿಹಾರ ವರ್ಗಾವಣೆ ಮಾಡಲಾಗಿದೆ..
ರಾಜ್ಯದ 34 ಲಕ್ಷ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ 3,454 ಕೋಟಿ ರೂ. ಹಣವನ್ನು ಇನ್ ಪುಟ್ ಸಬ್ಸಿಡಿಯ ಬಾಕಿ ಮೊತ್ತವನ್ನು ಡಿಬಿಟಿ ಮೂಲಕ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ.
ಜಿಲ್ಲಾವಾರು ಅರ್ಹ ರೈತರ ಖಾತೆಗಳಿಗೆ ಬೆಳೆ ಪರಿಹಾರ ಹಣ ಸಂದಾಯ ಮಾಡಲಾಗಿದೆ. ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿಕೊಳ್ಳಬಹುದು. ಈ ಕೆಳಗೆ ನೀಡಿರುವ DBT Status ಚೆಕ್ ಮೂಲಕ ನಿಮಗೆ ಹಣ ಬಂದಿದೆಯಾ ಎಂಬುದನ್ನು ನೋಡಬಹುದು.
ಹಂತ-1: How to Check Bele Parihara Karnataka Status:
Step-1: ಮೊದಲಿಗೆ ಕೇಳಗೆ ನೀಡಲಾಗಿರುವ ಲಿಂಕ್ ಮೂಲಕ DBT Karnataka ಅಧಿಕೃತ App ಡೌನ್‌ಲೋಡ್ ಮಾಡಿಕೊಳ್ಳಿ.
Step-2: DBT Karnataka App ಓಪನ್ ಮಾಡಿದ ನಂತರ ಅಲ್ಲಿ Enter Aadhaar Number ಎಂದಿರುವಲ್ಲಿ ಫಲಾನುಭವಿಯ ಆಧಾರ ಸಂಖ್ಯೆಯನ್ನು ಎಂಟರ್ ಮಾಡಿ. GET OTP ಬಟನ್ ಮೇಲೆ ಕ್ಲಿಕ್ ಮಾಡಿ.
Step-3: ಫಲಾನುಭವಿಯ ಆಧಾರ ಕಾರ್ಡ್‌ಗೆ ಲಿಂಕ್ ಇರುವ ಮೊಬೈಲ್ ನಂಬರ್‌ಗೆ OTP ಬರುತ್ತದೆ. OTP ಎಂಟರ್ ಮಾಡಿ. Verify OTP ಬಟನ್ ಮೇಲೆ ಕ್ಲಿಕ್ ಮಾಡಿ.
Step-4: ಫಲಾನುಭವಿಯ ವಯಕ್ತಿಕ ವಿವರ ಕಾಣುತ್ತದೆ. ಅಲ್ಲಿ ಮೊಬೈಲ್ ನಂಬರ್ ಎಂಟರ್ ಮಾಡಲು ತಿಳಿಸಲಾಗಿರುತ್ತದೆ. ಆಧಾರಗೆ ಲಿಂಕ್ ಇರುವ ಮೊಬೈಲ್ ನಂಬರ್ ನಮೂದಿಸಿ. OK ಬಟನ್ ಮೇಲೆ ಕ್ಲಿಕ್ ಮಾಡಿ.
Step-5: ತದನಂತರ Create mPIN ಎಂದು ತಿಳಿಸಲಾಗುತ್ತದೆ. ಅಲ್ಲಿ ನಿಮ್ಮ ನೆನಪಿನಲ್ಲಿ ಉಳಿಯುವಂತಹ ನಾಲ್ಕು ಅಂಕಿಗಳ mPIN ಎಂಟರ್ ಮಾಡಿ. Submit ಬಟನ್ ಮೇಲೆ ಕ್ಲಿಕ್ ಮಾಡಿ.
Step-6: ನಂತರ ಅಲ್ಲಿ Select Beneficiary ಎಂದು ಬರುತ್ತದೆ. ನೀವು Add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಿ.
Step-7: ಫಲಾನುಭವಿಯನ್ನು ಆಯ್ಕೆ ಮಾಡಿದ ನಂತರ mPIN ಅನ್ನು ಎಂಟರ್ ಮಾಡಿ. LOGIN ಬಟನ್ ಮೇಲೆ ಕ್ಲಿಕ್ ಮಾಡಿ.
Step-8: ನಂತರ Payment Status ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
Step-9: ನಿಮಗೆ ದೊರೆತಿರುವ ಸರ್ಕಾರಿ ಯೋಜನೆಗಳ ಮಾಹಿತಿ ಅಲ್ಲಿರುತ್ತದೆ. ಈಗ ನೀವು Input Subsidy For Crop Loss ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
Step-10: ನಿಮ್ಮ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರದಿಂದ ಬೆಳೆ ಹಾನಿಯ 2000 ರೂ. ಜಮಾ ಆಗಿರುವ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಯಾವ ಬ್ಯಾಂಕ್ ಖಾತೆಗೆ, ಯಾವ ದಿನಾಂಕದಂದು ಹಣ ವರ್ಗಾವಣೆ ಆಗಿರುತ್ತದೆ ಎಂಬ ವಿವರಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಬಹುದು.
Bele Parihara Karnataka Status Check ಪ್ರಮುಖ ಲಿಂಕ್‌ಗಳು:
DBT Karnataka App Link: Download ಮಾಡಿ
ಹಂತ-2: Bele Parihara List Karnataka:
ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳನ್ನು ಪಡೆಯಲು ಈ ಕೇಳಗೆ ನೀಡಿರುವ ಹಂತಗಳನ್ನು ಅನುಸರಿಸಿ.
- Step-1: ವರ್ಷ ಆಯ್ಕೆ ಮಾಡಿ ಎಂಬಲ್ಲಿ 2023-24 ಅನ್ನು ಆಯ್ಕೆ ಮಾಡಿ
- Step-2: “ಮುಂಗಾರು” ಋತು ಆಯ್ಕೆ ಮಾಡಿ
- Step-3: ನಂತರ ವಿಪತ್ತಿನ ವಿಧದಲ್ಲಿ “ಬರ” ಎಂಬುದನ್ನು ಆಯ್ಕೆ ಮಾಡಿ
- Step-4: ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ನಿಮ್ಮ ಹಳ್ಳಿಯ ಹೆಸರನ್ನು ಆಯ್ಕೆ ಮಾಡಿ
- Step-5: ನಂತರ Get Report ಬಟನ್ ಮೇಲೆ ಕ್ಲಿಕ್ ಮಾಡಿ
ಅಂತಿಮವಾಗಿ ನಿಮ್ಮ ಮುಂದೆ ನಿಮ್ಮ ಹಳ್ಳಿಯ ಬೆಳೆ ಪರಿಹಾರ ಪಟ್ಟಿಯನ್ನು ನೋಡಬಹುದು.
Bele Parihara List Karnataka Link: Check Now
ಇತರೆ ಮಾಹಿತಿಗಳನ್ನು ಓದಿ:
ಗೃಹಲಕ್ಷ್ಮೀ ಯೋಜನೆ DBT Status Check ಮಾಡಿ
1 thought on “ಬೆಳೆ ಪರಿಹಾರ ಜಮಾ ಮೊಬೈಲ್‌ನಲ್ಲೇ Status Check ಮಾಡಿ | Bele Parihara Karnataka 2023-24 Payment Status Check Online @parihara.karnataka.gov.in”