Crop Insurance: ಬೆಳೆ ವಿಮೆ ಅರ್ಜಿ ಸಲ್ಲಿಕೆ ಆರಂಭ, ಬೇಗ ಅರ್ಜಿ ಸಲ್ಲಿಸಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಬೆಳೆ ವಿಮೆ ಅರ್ಜಿ (Crop Insurance) ಸಲ್ಲಿಸಿಲ್ಲವೇ? ಅರ್ಜಿ ಸಲ್ಲಿಸುವುದು ಹೇಗೆ..? ಯಾವ ದಾಖಲೆಗಳು ಬೇಕಾಗುತ್ತವೆ..? ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಪ್ರಕೃತಿ ವಿಕೋಪಗಳಿಂದ ರೈತರು ಬೆಳೆದಿರುವ ಬೆಳೆಗಳು ಸರಿಯಾಗಿ ಬರದೆ ರೈತರು ನಷ್ಟ ಅನುಭವಿಸುವಂತಾಗುತ್ತದೆ. ಅಂತಹ ಸಂದರ್ಭದಲ್ಲಿ ಸರ್ಕಾರವು ನೀಡುವ ವಿಮೆಯ ಮೊತ್ತವು ರೈತರಿಗೆ ಸಹಾಯವಾಗುತ್ತದೆ. ರೈತರು ತಾವು ಬೆಳೆದ ಬೆಳೆಗಳಿಗೆ ಇದೆ ತಿಂಗಳ ಒಳಗಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು ಬೆಳೆ ವಿಮೆ (Crop Insurance) ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅತಿವೃಷ್ಟಿ, ಅನಾವೃಷ್ಟಿ, ಸೇರಿದಂತೆ ಹಲವಾರು ಕಾರಣಗಳಿಂದ ರೈತರಿಗೆ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವು ಈ ಯೋಜನೆಯ ಉದ್ದೇಶವಾಗಿದೆ.

ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಕೆಲವೆ ದಿನಗಳು ಉಳಿದಿವೆ. ಯಾರು ಇದುವರೆಗೂ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿರುವುದಿಲ್ಲ ಅಂತವರು ಇದೆ ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಬಹುದು.

ವಿಮೆ ಕಟ್ಟಲು ಕೊನೆಯ ದಿನಾಂಕ:
ಮುಸುಕಿನ ಜೋಳ, ಭತ್ತ, ಜೋಳ, ಸಜ್ಜೆ, ನವಣೆ, ತೊಗರಿ, ಹೆಸರು, ಸೂರ್ಯಕಾಂತಿ, ಎಳ್ಳು, ನೆಲಗಡಲೆ (ಶೇಂಗಾ), ಹತ್ತಿ ಈ ಮೇಲಿನ ಎಲ್ಲ ಬೆಳೆಗಳಿಗೆ ಇದೆ ತಿಂಗಳು 31-07-2024 ರ ಒಳಗಾಗಿ ರೈತರು ವಿಮೆ ಮಾಡಿಸಿಕೊಳ್ಳಿ. ಹೆಸರು ಬೆಳೆಗೆ 15-07-2024 ವಿಮಾ ಕಟ್ಟುವ ಕೊನೆಯ ದಿನ. ಸೂರ್ಯಕಾಂತಿ ಬೆಳೆಗೆ 16-07-2024 ರ ಮೊದಲು ಬೆಳೆ ವಿಮೆ ಮಾಡಿಸಿಕೊಳ್ಳಿ.

ತೋಟಗಾರಿಕಾ ಬೆಳೆಗಳು:
ದ್ರಾಕ್ಷಿ, ದಾಳಿಂಬೆ, ಮಾವು ಹಾಗೂ ಹಸಿ ಮೆಣಸಿನಕಾಯಿ ಬೆಳೆಗಳಿಗೆ ಬೆಳೆವಿಮೆ ಪಾವತಿಸಲು ಜುಲೈ 31ರವರೆಗೆ ಅವಕಾಶ ನೀಡಲಾಗಿದೆ. ರೈತರು ಕೊನೆಯ ದಿನಾಂಕದೊಳಗೆ ಬೆಳೆ ವಿಮೆ ಮಾಡಿಸಿಕೊಳ್ಳಿ. ಬೆಳೆಗಳನ್ನು ಆಯಾ ತಾಲ್ಲೂಕಿಗೆ ವಿಂಗಡಣೆ ಮಾಡಲಾಗಿದೆ.

Crop Insurance; ಬೇಕಾಗುವ ದಾಖಲೆಗಳು:

  • ಜಮೀನಿನ ಪಹಣಿ/ ಉತಾರ್/RTC
  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್

ಅರ್ಜಿ ಸಲ್ಲಿಸುವುದು ಹೇಗೆ..?
ನಿಮ್ಮ ಹತ್ತಿರದ CSC ಕೇಂದ್ರ ಅಥವಾ ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇತರೆ ಮಾಹಿತಿಗಳನ್ನು ಓದಿ:

ಮೊಬೈಲ್‌ನಲ್ಲೇ ಜಮೀನಿನ ಪಹಣಿ + ಆಧಾರ್ ಕಾರ್ಡ್ ಲಿಂಕ್‌ ಮಾಡಿ

ರೇಷನ್‌ ಕಾರ್ಡ್‌ Status Check ಮಾಡಿ

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು ಗೊತ್ತಾ..?

ಬೆಳೆ ಪರಿಹಾರ ಜಮಾ ಮೊಬೈಲ್‌ನಲ್ಲೇ Status Check ಮಾಡಿ

ಗೃಹಲಕ್ಷ್ಮಿ DBT Status Check ಮಾಡಿ

Leave a Comment

error: Content is protected !!