ಉಚಿತ ಡೇಟಾ ಎಂಟ್ರಿ ಆಪರೇಟರ್ ತರಬೇತಿಗೆ ಅರ್ಜಿ ಅಹ್ವಾನ | Free Data Entry Operator Training

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಗುಡ್ ನ್ಯೂಸ್. ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2023-24 ನೇ ಸಾಲಿನ ಕೌಶಲ್ಯಾಭಿವೃದ್ಧಿ (ತಾಂತ್ರಿಕ ನೈಪುಣ್ಯತೆ) ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯ ಹಾಗೂ ಅರಣ್ಯ ಆಧಾರಿತ ಆದಿವಾಸಿ ಸಮುದಾಯಕ್ಕೆ ಸೇರಿದ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.

Free Data Entry Operator Training:

ಬಹು ಕೌಶಲ್ಯ ತಂತ್ರಜ್ಞ (ವಿದ್ಯುತ್) (MULTI SKILL TECHNICIAN (ELECTRICAL) ಗೆ 8ನೇ ತರಗತಿ ಉತ್ತೀರ್ಣರಾಗಿರಬೇಕು.
ಸ್ವಯಂ ಉದ್ಯೋಗದ ಟೈಲರ್ (SELF EMPLOYED TAILOR)ಗೆ 8ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರಬೇಕು. ಸಹಾಯಕ ಸೌಂದರ್ಯ ಚಿಕಿತ್ಸಕ (ASSISTANT BEAUTY THERAPIST) ಗೆ 8ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರಬೇಕು ಮತ್ತು ಡೊಮೆಸ್ಟಿಕ್ ಡೇಟಾ ಎಂಟ್ರಿ ಆಪರೇಟರ್ (DATA ENTRY OPERATOR) ಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ:
ಅರ್ಜಿ ಸಲ್ಲಿಸುವ ಅರ್ಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 46 ವರ್ಷ ವಯೋಮಿತಿಯೊಳಗಿನವರು ಅರ್ಜಿ ಸಲ್ಲಿಸಬಹುದು.

ತರಬೇತಿಯ ಅವಧಿ:
ಎರಡು ತಿಂಗಳ ಅವಧಿಗೆ ತರಬೇತಿಯನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ ಪತ್ರ ಮತ್ತು ವಿದ್ಯಾರ್ಹತೆ ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗಧಿತ ಅರ್ಜಿ ನಮೂನೆಗಳನ್ನು ಜಂಟಿ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ನಂ.21/1,1ನೇ ಮಹಡಿ, ಜೆಲ್ಲೇಟಾ ಟವರ್ಸ್, ಮಿಷನ್ ರಸ್ತೆ, ಸಂಪಂಗಿರಾಮನಗರ (ಸುಬ್ಬಯ್ಯ ಸರ್ಕಲ್), ಬೆಂಗಳೂರು-560027 ಇಲ್ಲಿ ಅರ್ಜಿಯನ್ನು ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿಗಳೊಂದಿಗೆ ಜುಲೈ 06 ರೊಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22240449, 22240999 ಗೆ ಸಂರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತರೆ ಮಾಹಿತಿಗಳನ್ನು ಓದಿ:

Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ

ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ

ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಆರಂಭ

ರೈತರಿಗೆ ಗುಡ್ ನ್ಯೂಸ್: ರೈತರ ಖಾತೆಗಳಿಗೆ 3,000 ರೂ. ಜಮಾ

ಗೃಹಲಕ್ಷ್ಮಿ DBT Status Check ಮಾಡಿ

Leave a Comment

error: Content is protected !!