FRUITS ID: ಫ್ರೂಟ್ಸ್ ಐಡಿ ನೋಂದಾಣಿ ಮಾಡಿಕೊಳ್ಳಿ, ಸರ್ಕಾರದ ಸಹಾಯಧನ, ಸೌಲಭ್ಯ ಪಡೆದುಕೊಳ್ಳಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಫ್ರೂಟ್ಸ್ ಐಡಿ ಬಗ್ಗೆ ನಿಮಗೆ ತಿಳಿದಿದೆಯೇ..? ಫ್ರೂಟ್ಸ್ ಐಡಿ ಇದ್ದರೆ ಸರ್ಕಾರದ ಯಾವೇಲ್ಲಾ ಸೌಲಭ್ಯ ದೊರೆಯಲಿವೆ ಹಾಗೂ FRUITS ID ಮಾಡಿಸಲು ಯಾವ ದಾಖಲೆಗಳು ಬೇಕಾಗುತ್ತವೆ. ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳಬೇಕಾದರೆ ರೈತರಿಗೆ ಫ್ರೂಟ್ಸ್ ಐಡಿ ಕಡ್ಡಾಯವಾಗಿದೆ. ಫ್ರೂಟ್ಸ್ ಐಡಿ ಇರದ ರೈತರಿಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಹಾಗೆಯೇ ಬ್ಯಾಂಕಿನಲ್ಲಿ ಸಾಲ ದೊರೆಯುವುದಿಲ್ಲ.

ಕೃಷಿ ಇಲಾಖೆಯು ತಮ ಹತ್ತಿರ ಇರುವ ದಾಖಲೆಗಳನುಸಾರವಾಗಿ ರೈತರ ಫ್ರೂಟ್ಸ್ ಐಡಿಯನ್ನು ಮಾಡಿದ್ದಾರೆ. ಕೆಲವು ರೈತರ ಫ್ರೂಟ್ಸ್ ಐಡಿ ಆಗಿರುವುದಿಲ್ಲ. ಹೊಸದಾಗಿ ಜಮೀನು ಖರೀದಿಸಿದವರ ಫ್ರೂಟ್ಸ್ ಐಡಿ ಇರುವುದಿಲ್ಲ. ರೈತರು ತಮ್ಮ ಹೆಸರಿನಲ್ಲಿ ಪ್ರೂಟ್ಸ್ ಐಡಿ ಇದೇಯಾ ಅಥವಾ ಇಲ್ಲವೇ ಎಂಬುದನ್ನು ಚೆಕ್ ಮಾಡಿಸಿಕೊಳ್ಳಬೇಕು.

ಫ್ರೂಟ್ಸ್ ಎಂದರೇನು: ಫ್ರೂಟ್ಸ್: “ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ”. FRUITS- Farmer Registration & Unified Beneficiary InformaTion System) ಅಂತರ್ಜಾಲ ಆಧಾರಿತ ತಂತ್ರಾಂಶ ವ್ಯವಸ್ಥೆಯಾಗಿದೆ. 

ಫ್ರೂಟ್ಸ್ ಐಡಿಯಿಂದ ದೊರೆಯುವ ಸೌಲಭ್ಯಗಳು:
ಕೃಷಿಗೆ ಸಂಬಂಧಿಸಿದಂತೆ ಯಂತ್ರೋಪಕರಣಗಳ ಖರೀದಿಗೆ, ತೋಟಗಾರಿಕೆ, ಕೃಷಿ ಇಲಾಖೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆಯಿಂದ ರೈತರು ಯಾವುದೇ ಸೌಲಭ್ಯಗಳನ್ನು ಪಡೆಯಬೇಕಾದರೆ ಫ್ರೂಟ್ಸ್ ಐಡಿಯು ಕಡ್ಡಾಯವಾಗಿರುತ್ತದೆ.

ಕುರಿ,ಮೇಕೆ ಕೋಳಿ, ಸಾಕಾಣಿಕೆಯ ಸಬ್ಸಿಡಿ ಪಡೆಯಲು, ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಬೋರ್ವೆಲ್ ಕೊರೆಯಲು ಸಬ್ಸಿಡಿ ಪಡೆಯಲು ರೈತರಿಗೆ ಫ್ರೂಟ್ಸ್ ಐಡಿ ಬೇಕಾಗುತ್ತದೆ. ಮತ್ತು ಕೃಷಿ ಹೊಂಡ ನಿರ್ಮಾಣಕ್ಕೂ ಫ್ರೂಟ್ಸ್ ಐಡಿ ಬೇಕು.

FRUITS ID ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಪಹಣಿ ಉತಾರ (ಆರ್.ಟಿ.ಸಿ)
  • ಎಲ್ಲಾ ಸರ್ವೆ ನಂಬರ್ ಗಳ ಪಹಣಿ ನೀಡಬೇಕು.
  • ರೈತರು SC/ST ಗೆ ಸೇರಿದವರಾಗಿದ್ದರೆ ಜಾತಿ ಪ್ರಮಾಣ ಪತ್ರ ನೀಡಬೇಕು.
  • ಬ್ಯಾಂಕ್ ಪಾಸ್ ಬುಕ್
  • ಇತ್ತೀಚಿನ ಭಾವಚಿತ್ರ

FRUITS ID ಗೆ ಅರ್ಜಿ ಸಲ್ಲಿಸುವ ವಿಧಾನ:
ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಿಸಬಹುದು. ಹಾಗೂ ಗ್ರಾಮ ಒನ್, ಕರ್ನಾಟಕ ಒನ್,  ಸಿಎಸ್.ಸಿ ಕೇಂದ್ರಗಳಲ್ಲಿಯೂ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬಹುದು. ಅಥವಾ ಫ್ರೂಟ್ಸ್ ವೆಬ್ಸೈಟ್ನಲ್ಲಿ “ನಾಗರೀಕ ಪ್ರವೇಶ (Citizen Login)” ಗೆ ಭೇಟಿ ನೀಡಿ ಸ್ವಯಂ ನೋಂದಾಯಿಸಿಕೊಳ್ಳಬಹುದು.

ಇತರೆ ಮಾಹಿತಿಗಳನ್ನು ಓದಿ:

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಗೃಹಲಕ್ಷ್ಮೀ DBT Status Check ಮಾಡಿ, 2000 ರೂ. ಬಂತಾ ನೋಡಿ

ಗೃಹಲಕ್ಷ್ಮೀ ಯೋಜನೆ

Leave a Comment

error: Content is protected !!