ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಯ ಹಣವು ನಿಮ್ಮ ಖಾತೆಗೆ ಸಂದಾಯವಾಗಿಲ್ಲವೆ..? ಯಾವಾಗ ಹಣ ಜಮಾ ಆಗಲಿದೆ ಎಂದು ಕಾಯುತ್ತಿದ್ದೀರಾ..? ಗೃಹಲಕ್ಷ್ಮೀ ಯೋಜನೆಯ (Gruhalakshmi Scheme) ಹಣ ಯಾವಾಗ ಫಲಾನುಭವಿಗಳ ಖಾತೆ ಸೇರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ಅನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. 10 ಕಂತುಗಳ ಹಣವು ಫಲಾನುಭವಿಗಳ ಖಾತೆಗೆ ಜಮಾ ಆಗಿದ್ದು 11 ಮತ್ತು 12 ನೇ ಕಂತಿನ ಹಣವು ಯಾವಾಗ ಖಾತೆ ಸೇರಲಿದೆ ಎಂದು ಮಹಿಳೆಯರು ಕಾತುರದಿಂದ ಕಾಯುತ್ತಿದ್ದಾರೆ.
Gruhalakshmi Scheme 11th Installment Amount:
ಜೂನ್ ತಿಂಗಳಿನ ಹಣವನ್ನು ಈಗಾಗಲೇ DBT ಮೂಲಕ ವರ್ಗಾವಣೆ ಮಾಡಲಾಗಿದೆ. ಇನ್ನು ಎರಡು ದಿನಗಳಲ್ಲಿ ಜುಲೈ ತಿಂಗಳ ಹಣವನ್ನು ವರ್ಗಾವಣೆ ಮಾಡುತ್ತೇವೆ. ಆಗಸ್ಟ್ ತಿಂಗಳಿನ ಹಣ ಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಮಾಹಿತಿ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ ಅವರು ನಾವು ಎರಡು ಸಾವಿರದ ನಾಲ್ಕು ನೂರು ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಹಾಕುತ್ತೇವೆ. ಇದು ಬಹಳ ದೊಡ್ಡ ಮಟ್ಟದ ಹಣ ಆಗಿರುವುದರಿಂದ ಒಂದೊಂದು ಸಂದರ್ಭದಲ್ಲಿ ಈ ರೀತಿಯ ಸಮಸ್ಯೆಗಳು ಆಗುತ್ತದೆ.
ನಾನು ಮಂಡ್ಯದಲ್ಲಿ ಹೇಳಿದ್ದೆ DBT ಪುಶ್ ಮಾಡಿ ಮೂರು ದಿನ ಆಗಿದೆ ಇನ್ನು ನಾಲ್ಕೈದು ಜಿಲ್ಲೆಗಳಿಗೆ ಗೃಹಲಕ್ಷ್ಮೀ (Gruhalakshmi Scheme) ಹಣ ಹೋಗಬೇಕಿದೆ. ಅಲ್ಲದೆ ನಾವು ಬ್ಯಾಂಕ್‌ಗಳಿಗೆ ಕಳುಹಿಸಿಬಿಟ್ಟಿರುತ್ತೇವೆ. ಆ ಬಳಿಕ ಬ್ಯಾಂಕ್‌ಗಳು ಸ್ಥಳೀಯ ಮಟ್ಟದಲ್ಲಿ ಅವರ ಖಾತೆಗೆ ಹಣವನ್ನು ಜಮೆ ಮಾಡುವ ಕೆಲಸ ಮಾಡಬೇಕಿದೆ. ಇದು ದೊಡ್ಡ ಪ್ರೊಸೆಸ್ ಆದ ಕಾರಣಕ್ಕೆ ಸ್ವಲ್ಪ ಹೆಚ್ಚು ಕಮ್ಮಿಯಾಗುತ್ತದೆ ಎಂದು ಹೇಳಿದರು.
ಪ್ರತಿ ದಿನ ಸಮಸ್ಯೆ ಹೇಳಿಕೊಂಡು ದಿನಕ್ಕೆ 500 ಜನರು ಕರೆ ಮಾಡುತ್ತಿದ್ದಾರೆ. ಎಲ್ಲರಿಗೂ ಉತ್ತರ ಕೊಡುತ್ತನೆ. ಹಣ ಹಾಕಿದ ಮೇಲೆ ಅದು ಜಮಾ ಆಗುವುದಕ್ಕೆ 10 ರಿಂದ 12 ದಿನ ಬೇಕಾಗುತ್ತದೆ ಎಂದು ತಿಳಿಸಿದರು.
ಇತರೆ ಮಾಹಿತಿಗಳನ್ನು ಓದಿ: