HDFC ಬ್ಯಾಂಕ್‌ 75,000 ರೂ. ವಿದ್ಯಾರ್ಥಿವೇತನ, ದಿನಾಂಕ ವಿಸ್ತರಣೆ | HDFC Scholarship 2024 Apply Online @buddy4study.com

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. HDFC Parivartan Scholarship ವಿದ್ಯಾರ್ಥಿವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು. ಯಾವ ದಾಖಲೆಗಳು ಬೇಕಾಗುತ್ತವೆ. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಓದಿರಿ.

ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಸಹಾಯಕ್ಕಾಗಿ ಹಣಕಾಸಿನ ನೇರವು ನೀಡಿ ಅವರು ಶಿಕ್ಷಣದಿಂದ ವಂಚಿತರಾದಂತೆ ತಡೆದು ವಿದ್ಯಾರ್ಥಿಗಳಿಗೆ ಅವರ ಅಧ್ಯಯನಕ್ಕಾಗಿ 75 ಸಾವಿರ ರೂಪಾಯಿವರೆಗೆ ಹಣದ ಸಹಾಯವನ್ನು ನೀಡಲಾಗುತ್ತದೆ.

HDFC ಬ್ಯಾಂಕ್ ECSS ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪರಿವರ್ತನ್ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತದೆ. ECSS ಕಾರ್ಯಕ್ರಮದ ಅಡಿಯಲ್ಲಿ, ವೈಯಕ್ತಿಕ/ಕುಟುಂಬದ ಬಿಕ್ಕಟ್ಟುಗಳು ಅಥವಾ ಯಾವುದೇ ಇತರೆ ಹಣಕಾಸಿನ ಸಮಸ್ಯೆಗಳಿಂದಾಗಿ ಶಿಕ್ಷಣದ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಮತ್ತು ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳಿಗೆ ಹಣದ ಸಹಾಯವನ್ನು ನೀಡಲಾಗುತ್ತದೆ.

ಪ್ರಸ್ತುತ 1 ರಿಂದ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳು ಮತ್ತು ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಯುಜಿ, ಮತ್ತು ಪಿಜಿ (ಸಾಮಾನ್ಯ ಮತ್ತು ವೃತ್ತಿಪರ) ಕೊರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು.

HDFC Scholarship For PG Students 2024

ವಿದ್ಯಾರ್ಥಿಗಳು ಭಾರತದ ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು (ಸಾಮಾನ್ಯ ಕೋರ್ಸ್‌ಗಳು – MCom, MA, ಇತ್ಯಾದಿ ಮತ್ತು ವೃತ್ತಿಪರ ಕೋರ್ಸ್‌ಗಳು – MTech, MBA, ಇತ್ಯಾದಿ) ವ್ಯಾಸಂಗ ಮಾಡುತ್ತರಬೇಕು. 

ಸ್ಕಾಲರ್ಶಿಪ್’ನ ಪ್ರಯೋಜನಗಳು:
ಸಾಮಾನ್ಯ ಸ್ನಾತಕೋತ್ತರ ಕೋರ್ಸ್‌ಗಳಿಗೆ: 35,000 ರೂ.
ವೃತ್ತಿಪರ ಸ್ನಾತಕೋತ್ತರ ಕೋರ್ಸ್‌ಗಳಿಗೆ: 75,000 ರೂ.

HDFC Scholarship For Degree Students 2024:

ವಿದ್ಯಾರ್ಥಿಗಳು ಭಾರತದಲ್ಲಿನ ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಕೋರ್ಸ್‌ಗಳನ್ನು (ಸಾಮಾನ್ಯ ಕೋರ್ಸ್‌ಗಳು- BCom, BSc, BA, BCA, ಇತ್ಯಾದಿ ಮತ್ತು ವೃತ್ತಿಪರ ಕೋರ್ಸ್‌ಗಳು- BTech, MBBS, LLB, B Arch, ನರ್ಸಿಂಗ್) ವ್ಯಾಸಂಗ ಮಾಡುತ್ತರಬೇಕು.

Degree ಸ್ಕಾಲರ್ಶಿಪ್’ನ ಪ್ರಯೋಜನಗಳು:
ಸಾಮಾನ್ಯ ಪದವಿಪೂರ್ವ ಕೋರ್ಸ್‌ಗಳಿಗೆ: 30,000 ರೂ.
ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳಿಗೆ: 50,000 ರೂ.

HDFC Parivartan Scholarship For School Students 2024:

ವಿದ್ಯಾರ್ಥಿಗಳು ಪ್ರಸ್ತುತ 1 ರಿಂದ 12 ನೇ ತರಗತಿ, ಡಿಪ್ಲೊಮಾ, ಐಟಿಐ ಮತ್ತು ಪಾಲಿಟೆಕ್ನಿಕ್ ಕೋರ್ಸ್‌ಗಳಲ್ಲಿ ಖಾಸಗಿ, ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರಬೇಕು.

ಸ್ಕಾಲರ್ಶಿಪ್’ನ ಪ್ರಯೋಜನಗಳು:
1 ರಿಂದ 6 ನೇ ತರಗತಿಗೆ ವಿದ್ಯಾರ್ಥಿಗಳಿಗೆ: 15,000 ರೂ.
7 ರಿಂದ 12 ನೇ ತರಗತಿ, ಡಿಪ್ಲೊಮಾ, ITI ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ: 18,000 ರೂ.

ಅಗತ್ಯ ದಾಖಲೆಗಳು:

  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ಹಿಂದಿನ ವರ್ಷದ ಅಂಕಪಟ್ಟಿಗಳು (2023-24) 
  • ಗುರುತಿನ ಪುರಾವೆ (ಆಧಾರ್ ಕಾರ್ಡ್/ವೋಟರ್ ಐಡಿ/ಚಾಲನಾ ಪರವಾನಗಿ) 
  • ಪ್ರಸ್ತುತ ವರ್ಷದ ಪ್ರವೇಶ ಪುರಾವೆ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಗುರುತಿನ ಚೀಟಿ/ಬೊನಾಫೈಡ್ ಪ್ರಮಾಣಪತ್ರ) (2023-24)
  • ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್ ಆಥವಾ Canceled ಚೆಕ್
  • ಆದಾಯ ಪುರಾವೆ (ಕೆಳಗೆ ನೀಡಲಾದ ಮೂರು ಪುರಾವೆಗಳಲ್ಲಿ ಯಾವುದಾದರೂ)
  • ಕುಟುಂಬ/ವೈಯಕ್ತಿಕ ಬಿಕ್ಕಟ್ಟಿನ ಪುರಾವೆ (ಅನ್ವಯಿಸಿದರೆ)

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 31-12-2024

ಪ್ರಮುಖ ಲಿಂಕ್‌ಗಳು:
HDFC Scholarship Apply Online ಲಿಂಕ್:‌ Apply ಮಾಡಿ

ಇತರೆ ಮಾಹಿತಿಗಳನ್ನು ಓದಿ:

SSP Post Matric Scholarship 2024

ವಿದ್ಯಾರ್ಥಿಗಳಿಗೆ 35,000 ರೂಪಾಯಿ ಪ್ರೋತ್ಸಾಹಧನ, ಸರ್ಕಾರ ನೀಡಲಿದೆ ಈ ಹಣ

Leave a Comment

error: Content is protected !!