ಎಲ್ಲರಿಗೂ ನಮಸ್ಕಾರ, ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೆ..? ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ.? ಈ ವಿದ್ಯಾರ್ಥಿವೇತನಕ್ಕೆ (Legrand Empowering Scholarship) ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, B.Tech., BE, B.Arch., ಅಥವಾ ಹಣಕಾಸು ಅಥವಾ ವಿಜ್ಞಾನದಲ್ಲಿ (B.Sc., B.Com., BBA, ಇತ್ಯಾದಿ) ಇತರೆ ಪದವಿಗಳನ್ನು ಓದುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಲಾಭ ಪಡೆದುಕೊಳ್ಳಬಹುದು.
ಲೆಗ್ರಾಂಡ್ ಇಂಡಿಯಾ ಗ್ರುಪ್ ವತಿಯಿಂದ ಲೆಗ್ರಾಂಡ್ ಎಂಪವರಿಂಗ್ ಸ್ಕಾಲರ್‌ಶಿಪ್ ಅನ್ನು ನೀಡಲಾಗುತ್ತದೆ. ಪ್ರತಿಭಾವಂತ ಹುಡುಗಿಯರು, ವಿಕಲಚೇತನ ಹುಡುಗಿಯರು, ಕೋವಿಡ್ ಪೀಡಿತ ವಿದ್ಯಾರ್ಥಿಗಳು, LGBTQ+ ವಿದ್ಯಾರ್ಥಿಗಳು ಮತ್ತು ಒಂಟಿ ಪೋಷಕರು ಅಥವಾ ಅನಾಥ ವಿದ್ಯಾರ್ಥಿಗಳಿಗೆ ಅವರ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಲಾಗುವುದು.
Legrand Empowering Scholarship ಅರ್ಹತೆಗಳು:
- B.Tech., BE, B.Arch., BBA, B.Com., ಅಥವಾ B.Sc ಪದವಿ ಓದುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
- ಅಂಗವಿಕಲ ವಿದ್ಯಾರ್ಥಿನಿಯರು, LGBTQ+ ವಿದ್ಯಾರ್ಥಿಗಳು, ಕೋವಿಡ್ ಪೀಡಿತ ವಿದ್ಯಾರ್ಥಿಗಳು ಮತ್ತು ಒಂಟಿ ಪೋಷಕರು ಅಥವಾ ಅನಾಥ ವಿದ್ಯಾರ್ಥಿಗಳು ಅರ್ಹರು.
- 2023–24ನೇ ಸಾಲಿನಲ್ಲಿ 12th ಪೂರ್ಣಗೊಳಿಸಿರಬೇಕು.
- 10th, 12th ಪರೀಕ್ಷೆಗಳಲ್ಲಿ ಕನಿಷ್ಠ 70% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
- ಕುಟುಂಬದ ವಾರ್ಷಿಕ ಆದಾಯವು 5,00,000 ಕ್ಕಿಂತ ಕಡಿಮೆ ಇರಬೇಕು.
ಅಗತ್ಯ ದಾಖಲೆಗಳು:
- ID Card
- ವಯಸ್ಸಿನ ಪುರಾವೆ (ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪಾಸ್‌ಪೋರ್ಟ್, 10 ನೇ ತರಗತಿ Leaving Certificate)
- ಆಧಾರ್ ಕಾರ್ಡ್
- 10th,12th ಮಾರ್ಕ್ಸ್ ಕಾರ್ಡ್.
- ಕುಟುಂಬದ ಆದಾಯ ಪ್ರಮಾಣಪತ್ರ ಅಥವಾ ಕಳೆದ ಆರು ತಿಂಗಳ ಪೋಷಕರ/ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಫಾರ್ಮ್.
- ಅರ್ಜಿದಾರರ (ಅಥವಾ ಪೋಷಕರು) ಬ್ಯಾಂಕ್ ಖಾತೆ ವಿವರಗಳು.
- ಪಾಸ್‌ಪೋರ್ಟ್ ಗಾತ್ರದ ಪೋಟೋ
- ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಪ್ರವೇಶದ ಪುರಾವೆ ಅಥವಾ ಕಾಲೇಜು/ವಿಶ್ವವಿದ್ಯಾಲಯದ ಶುಲ್ಕ ರಶೀದಿ.
- PwD ಪ್ರಮಾಣಪತ್ರ/ಟ್ರಾನ್ಸ್ಜೆಂಡರ್ ಪ್ರಮಾಣಪತ್ರ/ಯಾವುದೇ ಮಾನ್ಯ ಪ್ರಮಾಣಪತ್ರ.
Legrand Empowering Scholarship ಪ್ರಯೋಜನಗಳು:
- ಸಾಮಾನ್ಯ ವರ್ಗದ ವಿದ್ಯಾರ್ಥಿನಿಯರು: 60% ವಾರ್ಷಿಕ ಕೋರ್ಸ್ ಶುಲ್ಕವನ್ನು ವರ್ಷಕ್ಕೆ 60,000 ರೂ. ವರೆಗೆ (ಯಾವುದು ಕಡಿಮೆಯೋ ಅದು) ಕೋರ್ಸ್ ಪೂರ್ಣಗೊಳ್ಳುವವರೆಗೆ ಅವರ ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ವಿದ್ಯಾರ್ಥಿನಿಯರಿಗೆ ಒದಗಿಸಲಾಗುತ್ತದೆ.
- ವಿಶೇಷ ವರ್ಗದ ವಿದ್ಯಾರ್ಥಿನಿಯರು: ಅಂಗವಿಕಲ ವಿದ್ಯಾರ್ಥಿನಿಯರು, LGBTQ+ ವಿದ್ಯಾರ್ಥಿಗಳು, ಕೋವಿಡ್ ಪೀಡಿತ ವಿದ್ಯಾರ್ಥಿಗಳು ಮತ್ತು ಒಂಟಿ ಪೋಷಕರು ಅಥವಾ ಅನಾಥ ವಿದ್ಯಾರ್ಥಿಗಳಿಗೆ 80% ವಾರ್ಷಿಕ ಕೋರ್ಸ್ ಶುಲ್ಕವನ್ನು ವರ್ಷಕ್ಕೆ 1,00,000 ರೂ. (ಯಾವುದು ಕಡಿಮೆಯೋ ಅದು) ಕೋರ್ಸ್ ಪೂರ್ಣಗೊಳ್ಳುವವರೆಗೆ ವಿಶೇಷ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲುವ ದಿನಾಂಕ:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 05-09-2024
ಪ್ರಮುಖ ಲಿಂಕ್‌ಗಳು:
Scholarship ಲಿಂಕ್: Apply ಮಾಡಿ
ಇತರೆ ಮಾಹಿತಿಗಳನ್ನು ಓದಿ:
ವಿದ್ಯಾಸಿರಿ ವಿದ್ಯಾರ್ಥಿವೇತನ 2024
ವಿದ್ಯಾರ್ಥಿವೇತನಕ್ಕೆ ಅರ್ಹರು ಅರ್ಜಿ ಸಲ್ಲಿಸಿ, ಹಣಕಾಸು ನೆರವು ಪಡೆಯಿರಿ
ವಿದ್ಯಾರ್ಥಿಗಳಿಗೆ 35,000 ರೂಪಾಯಿ ಪ್ರೋತ್ಸಾಹಧನ, ಸರ್ಕಾರ ನೀಡಲಿದೆ ಈ ಹಣ