ಎಲ್ಲರಿಗೂ ನಮಸ್ಕಾರ, ಮೊಟೊರೊಲಾ ಕಂಪನಿಯು Moto G ಸರಣಿಯ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, Motorola Moto G85 ಮೊಬೈಲ್ ಅನ್ನು ಇಂದು (ಜುಲೈ 10) ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ, ಬ್ಯಾಟರಿ, ಕ್ಯಾಮೆರಾ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
Motorola Moto G85 ವಿಶೇಷತೆಗಳು:
Snapdragon 6s Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 120 Hz ರಿಫ್ರೆಶ್ ರೇಟ್ 6.67-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 2400×1080 ಪಿಕ್ಸೆಲ್‌ಗಳ (FHD+) ರೆಸಲ್ಯೂಶನ್ ಅನ್ನು 395 ಪಿಕ್ಸೆಲ್‌ಗಳ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಡಿಸ್ಪ್ಲೇ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 5 ಅನ್ನು ಹೊಂದಿದೆ. Moto G85 5G ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ.
ಬ್ಯಾಟರಿ ಮಾಹಿತಿ:
Moto G85 5G ಸ್ಮಾರ್ಟ್ ಫೋನ್ ನಲ್ಲಿ 5000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಅನ್ನು ಕಂಪನಿಯು ನೀಡಿದೆ.
Motorola Moto G85 ಕ್ಯಾಮೆರಾ ಮಾಹಿತಿ:
ಈ ಪೋನ್ ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದೆ. ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೇಲ್ಪಿ ಕ್ಯಾಮೆರಾ ಇರಲಿದೆ.
ಬಣ್ಣಗಳ ಮಾಹಿತಿ:
ಮೂರು ಆಕರ್ಷಕ ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ. ಕೋಬಾಲ್ಟ್ ಬ್ಲೂ (Cobalt Blue), ಆಲಿವ್ ಗ್ರೀನ್ (Olive Green) ಮತ್ತು ಅರ್ಬನ್ ಗ್ರೇ (Urban Grey) ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಬೆಲೆ ಹಾಗೂ Storage ಮಾಹಿತಿ:
8GB RAM ಹಾಗೂ 128 Storage ನ ಬೆಲೆ: 17,999 ರೂ.
12GB RAM ಹಾಗೂ 256 Storage ನ ಬೆಲೆ: 19,999 ರೂ.
ಇದು ಧೂಳು ಮತ್ತು ನೀರಿನ ರಕ್ಷಣೆಗಾಗಿ IP52 ರೇಟಿಂಗ್ ಅನ್ನು ಹೊಂದಿದೆ. ಇದು vegan leather ಹೊದಿಕೆಯನ್ನು ಹೊಂದಿದೆ. ಇಂದಿನಿಂದ (ಜುಲೈ 16 ರಿಂದ) ಪ್ಲಿಪ್ ಕಾರ್ಟ್ (Flipkart) ಮತ್ತು ಇತರೆ ಈ ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿರಲಿದೆ.
ಇತರೆ ಮಾಹಿತಿಗಳನ್ನು ಓದಿ:
ಕಡಿಮೆ ಬೆಲೆಗೆ ವಿವೊ 5G ಸ್ಮಾರ್ಟ್ ಫೋನ್ ಬಿಡುಗಡೆ