ಎಲ್ಲರಿಗೂ ನಮಸ್ಕಾರ, ರೈತರಿಗೆ ಗುಡ್ ನ್ಯೂಸ್. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ 17 ನೇ ಕಂತಿನ ಹಣ (PM Kisan 17th Installment) ಯಾವಾಗ ನಿಮ್ಮ ಕೈ ಸೇರಲಿದೆ ಎಂದು ಕಾತುರದಿಂದ ಕಾಯುತ್ತಿದ್ದೀರಾ..? ಹಾಗಿದ್ದರೆ ಚಿಂತೆ ಬಿಡಿ. 17 ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಅಂತ ಈ ಲೇಖನದಲ್ಲಿ ತಿಳಿಸಲಿದ್ದೆವೆ.
ಹೌದು ರೈತರಿಗೆ ಇಗಾಗಲೆ 16 ನೇ ಕಂತಿನ ಹಣವು ಸಂದಾಯವಾಗಿದ್ದು 17 ನೇ ಕಂತಿನವು ಹಣವು ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರವು ರೈತರಿಗೆ ಹಾಗೂ ಅವರ ಕುಟುಂಬಗಳಿಗೆ ಆರ್ಥಿಕ ನೇರವು ನೀಡಲು ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ.
PM Kisan 17th Installment Amount:
ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಮೂಲಕ ಅರ್ಹ ರೈತರಿಗೆ ವಾರ್ಷಿಕ 6000 ರೂ. ಅನ್ನು ಮೂರು ಕಂತುಗಳ ಮೂಲಕ ನಾಲ್ಕು ತಿಂಗಳಿಗೊಮ್ಮೆ ಅರ್ಹ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಸತತ ಮೂರನೇ ಬಾರಿ ಪ್ರಧಾನ ಮಂತ್ರಿ ಪ್ರಮಾಣವಚನ ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಹಣ ಬಿಡುಗಡೆಗೆ ಕಡತಕ್ಕೆ ಸಹಿ ಮಾಡಿದ್ದಾರೆ. 9.3 ಕೋಟಿ ರೈತರಿಗೆ ಸುಮಾರು 20,000 ಕೋಟಿ ರೂ.ಗಳನ್ನು ವಿತರಣೆ ಮಾಡಲಾಗುತ್ತಿದೆ. ಇದು ರೈತರಿಗೆ ಪ್ರಯೋಜನವನ್ನು ನೀಡಲಿದೆ.
ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಹಣ ಬಿಡುಗಡೆ ಕಡತಕ್ಕೆ ಸಹಿ ಮಾಡಿ ಮಾತನಾಡಿದ ಪ್ರಧಾನಿ ಮೋದಿ ಅವರು, “ನಮ್ಮ ಸರ್ಕಾರ ರೈತರ ಕಲ್ಯಾಣಕ್ಕಾಗಿ ಸಂಪೂರ್ಣವಾಗಿ ಬದ್ಧವಾಗಿದೆ, ಆದ್ದರಿಂದ ಅಧಿಕಾರ ವಹಿಸಿಕೊಂಡ ನಂತರ ಮೊದಲ ಸಹಿ ಮಾಡಿದ ಕಡತವು ರೈತರ ಕಲ್ಯಾಣಕ್ಕೆ ಸಂಬಂಧಿಸಿದೆ. ಮುಂದಿನ ದಿನಗಳಲ್ಲಿ ರೈತರ ಮತ್ತು ಕೃಷಿ ವಲಯಕ್ಕೆ ಇನ್ನೂ ಹೆಚ್ಚಿನ ಕೆಲಸ ಮಾಡಲು ನಾವು ಸಿದ್ಧ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಪ್ರಧಾನಮಂತ್ರಿ ಅವರು ಕಡತಕ್ಕೆ ಸಹಿ ಮಾಡಿದ್ದು, ಸದ್ಯದಲ್ಲೇ ಹಣ ಜಮಾ ಆಗಲಿದೆ.
ಇತರೆ ಮಾಹಿತಿಗಳನ್ನು ಓದಿ:
ರೈತರಿಗೆ ಗುಡ್ ನ್ಯೂಸ್: ರೈತರ ಖಾತೆಗಳಿಗೆ 3,000 ರೂ. ಜಮಾ
ಗೃಹಲಕ್ಷ್ಮಿಯ 11 ನೇ ಕಂತಿನ 2,000 ರೂ. ಹಣ ಬಿಡುಗಡೆ..!
ಪೋಸ್ಟ್ ಆಫೀಸ್ ನಲ್ಲಿ ಎಫ್‌ಡಿ ಮಾಡಿ, ದುಪಟ್ಟು ಲಾಭ ನಿಮ್ಮದಾಗಿಸಿಕೊಳ್ಳಿ
ಬೆಳೆ ಪರಿಹಾರ ಜಮಾ ಮೊಬೈಲ್‌ನಲ್ಲೇ Status Check ಮಾಡಿ