ಎಲ್ಲರಿಗೂ ನಮಸ್ಕಾರ, ರಿಯಲ್‌ಮಿ ಕಂಪನಿಯು ಎರಡು ಹೊಸ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. Realme 13 Pro 5G ಮತ್ತು ರಿಯಲ್‌ಮಿ 13 Pro Plus 5G ಹಾಗೂ ಇದರೊಂದಿಗೆ, Realme Watch S2 ಮತ್ತು Realme Buds T310 ಸಹ ಲಾಂಚ್ ಮಾಡಲಾಗಿದೆ. ಆಗಸ್ಟ್ 6 ರಿಂದ ಮಾರಾಟ ಪ್ರಾರಂಭವಾಗುತ್ತದೆ.
ಈ ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಕಂಪನಿಯು ಯಾವ ಹೊಸ ಪೀಚರ್ಸ್ ಗಳನ್ನು ನೀಡಲಿದೆ. ಬೆಲೆ ಎಷ್ಟು..? ಬ್ಯಾಟರಿ, ಸಂಗ್ರಹಣೆ ಸಾಮರ್ಥ್ಯ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಗಮನಿಸಿ.
ಕ್ಯಾಮೆರಾ ಮಾಹಿತಿ:
ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ, 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಮೂರನೇ 2-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ ಸೆಲ್ಫಿಗಾಗಿ 32-ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ.
Realme 13 Pro 5G ವಿಶೇಷತೆಗಳು:
ಎರಡೂ ಸ್ಮಾರ್ಟ್ ಫೋನ್ ಗಳು Snapdragon 7s Gen 2 ಪ್ರೊಸೆಸರ್ನಿಂದ ಚಾಲಿತವಾಗಿದ್ದು, 6.7-ಇಂಚಿನ (1,080×2,412 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಟ್ ಅನ್ನು ಹೊಂದಿದೆ. ಈ ಫೋನ್ ನಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯೊನ್ನು ಹೊಂದಿದೆ. 3D ಕೂಲಿಂಗ್ ಸಿಸ್ಟಮ್ ಇರಲಿದೆ. 120Hz ಕರ್ವ್ಡ್ Vision ಡಿಸ್‌ಪ್ಲೇ ಇದೆ. ಹಾಗೂ ಈ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 14 ನಲ್ಲಿ Realme UI 5.0 ನೊಂದಿಗೆ ಕಾರ್ಯನಿರ್ವಹಿಸುತ್ತವೆ.
Realme 13 Pro ಮತ್ತು Realme 13 Pro+ ಬ್ಯಾಟರಿ ಮಾಹಿತಿ:
ಈ ಎರಡೂ ಮೊಬೈಲ್ ಗಳು 5200mAh ಬ್ಯಾಟರಿಯನ್ನು ಹೊಂದಿವೆ. Realme 13 Pro+ 80W SuperVOOC ಪಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. Realme 13 Pro 45W SuperVOOC ಪಾಸ್ಟ್ ಚಾರ್ಜಿಂಗ್ ಅನ್ನು ಕಂಪನಿಯು ನೀಡಿದೆ.
ಎರಡು ಸ್ಮಾರ್ಟ್ ಪೋನ್ ನ ಬೆಲೆ ಮಾಹಿತಿ:
ರಿಯಲ್‌ಮಿ 13 Pro 5G ಪೋನ್ ಬೆಲೆ:
8GB RAM ಹಾಗೂ 128GB ಸ್ಟೋರೇಜ್ ನ ಬೆಲೆ: 23,999 ರೂ.
8GB RAM ಹಾಗೂ 256GB ಸ್ಟೋರೇಜ್ ನ ಬೆಲೆ: 25,999 ರೂ.
12GB RAM ಮತ್ತು 512GB ಸ್ಟೋರೇಜ್ ನ ಬೆಲೆ: 28,999 ರೂ.
ರಿಯಲ್‌ಮಿ 13 Pro+ 5G ಪೋನ್ ಬೆಲೆ:
8GB RAM ಹಾಗೂ 256GB ಸ್ಟೋರೇಜ್ ನ ಬೆಲೆ: 29,999 ರೂ.
12GB RAM ಹಾಗೂ 256GB ಸ್ಟೋರೇಜ್ ನ ಬೆಲೆ: 31,999 ರೂ.
12GB RAM ಹಾಗೂ 512GB ಸ್ಟೋರೇಜ್ ನ ಬೆಲೆ: 33,999 ರೂ.
ಆಗಸ್ಟ್ 6 ರಿಂದ ಮಾರಾಟ ಪ್ರಾರಂಭವಾಗುತ್ತದೆ. ICICI ಬ್ಯಾಂಕ್, HDFC ಬ್ಯಾಂಕ್ ಮತ್ತು SBI ಕಾರ್ಡ್‌ಗಳಿಂದ ಗ್ರಾಹಕರು ಖರೀದಿ ಮಾಡಿದರೆ 3,000 ರೂ. ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ 12 ತಿಂಗಳವರೆಗೆ ಯಾವುದೇ ನೊ ಕಾಸ್ಟ್ EMI ಪಡೆಯಬಹುದು.
ಇತರೆ ಮಾಹಿತಿಗಳನ್ನು ಓದಿ: