RTC Aadhar Link 2024: ಮೊಬೈಲ್‌ನಲ್ಲೇ ಜಮೀನಿನ ಪಹಣಿ + ಆಧಾರ್ ಕಾರ್ಡ್ ಲಿಂಕ್‌ ಮಾಡಿ, ಇಲ್ಲಿದೆ ಸುಲಭ ವಿಧಾನ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನಿಮ್ಮ ಜಮೀನಿನ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ (RTC Aadhar Link) ಮಾಡುವುದು ಹೇಗೆ ಎಂದು ತಿಳಿಯಬೇಕೆ? ಪಹಣಿಗೆ ಆಧಾರ್ ಕಾರ್ಡ್ Seeding ಮಾಡುವುದು ಅವಶ್ಯ. ಪಹಣಿಗೆ ಆಧಾರ್ ಕಾರ್ಡ ಲಿಂಕ್ ಮಾಡುವ ಸುಲಭ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

ರಾಜ್ಯದ ರೈತರು ಸ್ವಯಂ ಪ್ರೇರಣೆಯಿಂದ ತಮ್ಮ ಪಹಣಿಗಳಿಗೆ (RTC) ಆಧಾರ್ ಕಾರ್ಡ್‌ಗಳನ್ನು ಲಿಂಕ್ ಮಾಡುವಂತೆ ಕರ್ನಾಟಕ ಸರ್ಕಾರ ತಿಳಿಸಿದೆ.

ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಯೋಜನೆಗಳಾದ PM ಕಿಸಾನ್, ಬರ ಪರಿಹಾರ, ಬೆಳೆ ಹಾನಿ ಪರಿಹಾರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಮಾಡುವುದರಿಂದ ಅನುಕೂಲವಾಗಲಿದೆ.

ರೈತರಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸುಲಭವಾಗಿಸುವುದು ಮತ್ತು ಭ್ರಷ್ಟಾಚಾರವನ್ನು ತಡೆಯುವುದು ಮುಂತಾದ ಹಲವು ಪ್ರಯೋಜನಗಳು ಇದರಿಂದ ಆಗುತ್ತವೆ. ಆದ್ದರಿಂದ RTC Aadhar Link ಮಾಡಿಕೊಳ್ಳಿ.

ಆನ್‌ಲೈನ್ ಮೂಲಕ RTC Aadhar Link ಮಾಡುವ ವಿಧಾನ-1:

  • Step-1: ಮೊದಲಿಗೆ ಕರ್ನಾಟಕ ಸರ್ಕಾರದ “ಭೂಮಿ ನಾಗರಿಕ ಸೇವೆಗಳು” ವೆಬ್‌ಸೈಟ್‌ಗೆ ಭೇಟಿ ನೀಡಿ. (ಲಿಂಕ್‌ ಕೇಳಗೆ ನೀಡಲಾಗಿದೆ)
  • Step-2: ಆಧಾರಗೆ ಲಿಂಕ್‌ ಇರುವ ನಿಮ್ಮ ಮೊಬೈಲ್ ಸಂಖ್ಯೆ ಎಂಟರ್‌ ಮಾಡಿ ಮತ್ತು CAPTCHA ಕೋಡ್ ಅನ್ನು ನಮೂದಿಸಿ.
RTC Aadhar Link Step-1
RTC Aadhar Link
  • Step-3: “Send OTP” ಬಟನ್ ಮೇಲೆ ಕ್ಲಿಕ್ ಮಾಡಿ.
  • Step-4: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
  • Step-5: OTP ಅನ್ನು ಎಂಟರ್‌ ಮಾಡಿ ಮತ್ತು “LOGIN” ಬಟನ್ ಕ್ಲಿಕ್ ಮಾಡಿ.
  • Step-6: ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್‌ನಲ್ಲಿರುವಂತೆ ನಿಮ್ಮ ಹೆಸರನ್ನು ನಮೂದಿಸಿ. “ನಾನು ಇಲ್ಲಿ ಸ್ವಯಂಪ್ರೇರಣೆಯಿಂದ ಆಧಾರ್‌ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ” ಎಂಬುದನ್ನು ಆಯ್ಕೆ ಮಾಡಿ, Verify ಬಟನ್‌ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಕೇಳಗೆ ಇರುವ ಹಸಿರು ಬಣ್ಣದ “ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ” ಎಂಬುದರ ಮೇಲೆ ಕ್ಲಿಕ್‌ ಮಾಡಿ.
  • Step-7: ಮುಂದಿನ ಹಂತದಲ್ಲಿ ನಿಮ್ಮ ಆಧಾರ ಸಂಖ್ಯೆಯನ್ನು ಎಂಟರ್‌ ಮಾಡಿ. “ನನ್ನ ಆಧಾರ್ ಮಾಹಿತಿ (Identity Information) ಹಾಗೂ ಇತರ ಮಾಹಿತಿಗಳನ್ನು ಯು.ಐ.ಡಿ.ಎ.ಐ ನೊಂದಿಗೆ e-KYC ದೃಢೀಕರಣಕ್ಕೆ (Yes /No Authentication) ಸರ್ಕಾರ ಬಳಸಲು ನನ್ನ ಒಪ್ಪಿಗೆ ಇದೆ. ಇಲಾಖೆಯು ನನ್ನ ವಿವರಗಳನ್ನು ದತ್ತಾಂಶದಲ್ಲಿ ನಮೂದು (ಸೀಡ್) ಮಾಡಲು ಹಾಗು DBT ಮೂಲಕ ಹಣ ಸಂದಾಯ ಮಾಡಲು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಕಲ್ಯಾಣ ಯೋಜನೆಗಳಲ್ಲಿ ಬಳಸಲು ನನ್ನ ಸಹಮತಿ ಇದೆ.” ಎಂದು E-KYC ಮಾಡಲು ಒಪ್ಪಿಗೆ ನೀಡಬೇಕಾಗುತ್ತದೆ. ಅಲ್ಲಿಯೇ ಕೇಳಗೆ OTP, Face Capture, Fingerprint Capture ಎಂಬ ಮೂರು ಆಯ್ಕೆಗಳಿವೆ ನೀವು OTP ಎಂಬ ಆಯ್ಕೆಯನ್ನು ಟಿಕ್‌ ಮಾಡಬಹುದು. ನಂತರ Generate OTP ಬಟನ್‌ ಮೇಲೆ ಕ್ಲಿಕ್‌ ಮಾಡಿ. ನಿಮ್ಮ ಮೊಬೈಲ್‌ಗೆ ಬಂದ OTP ಅನ್ನು ಅಲ್ಲಿ ಎಂಟರ್‌ ಮಾಡಿ Submi ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-8: ನಂತರ ಹೊಸ Dashboard ಓಪನ್‌ ಆಗುತ್ತದೆ. Link Aadhaar ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
  • Step-9: ನಂತರ “ಭೂಮಿಯ ವಿವರಗಳು” ಎಂಬ ಪುಟ ಓಪನ್‌ ಆಗುತ್ತದೆ. ಅಲ್ಲಿ “Bhoomi Land Details” ಎಂಬಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಬೇಕು. ಅದರೊಂದಿಗೆ ನಿಮ್ಮ ಜಮೀನಿನ ಸರ್ವೆ ನಂಬರ್‌ ಎಂಟರ್‌ ಮಾಡಿ Go ಬಟನ್‌ ಕ್ಲಿಕ್‌ ಮಾಡಿ, ಅಕ್ಷರ ಭಾಗ ಮತ್ತು ಹಿಸ್ಸಾ ಸಂಖ್ಯೆ ನಮೂದಿಸಿ Search ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-10: ಪಹಣಿಯಲ್ಲಿರುವ ಮಾಲೀಕರು ಹೆಸರನ್ನು ಆಯ್ಕೆ ಮಾಡಿ ಹಾಗೂ ಮಾಲೀಕರ ಹೆಸರು ಆಧಾರ್‌ನಲ್ಲಿರುವ ಹೆಸರಿಗೆ ಹೊಂದಿಕೆಯಾಗಿದೇಯೆ ಎಂಬುದನ್ನು ಖಚಿತ ಪಡಿಸಿಕೊಂಡು Link ಬಟನ್‌ ಮೇಲೆ ಕ್ಲಿಕ್‌ ಮಾಡಿ.
RTC-Aadhar-Link-Step-6
Pahani Link To Aadhar Card
  • Step-11: ನಿಮ್ಮ ಪಹಣಿಗೆ ಯಶಸ್ವಿಯಾಗಿ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬ ಸಂದೇಶ ನಿಮಗೆ ತೋರಿಸಲಾಗುತ್ತದೆ.

RTC Aadhar Link ಮಾಡುವ ವಿಧಾನ-2:

ನಿಮ್ಮ ಹತ್ತಿರದ ಗ್ರಾಮ ಒನ್‌, ಕರ್ನಾಟಕ ಒನ್‌, ಬೆಂಗಳೂರು ಒನ್‌ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಸೇವಾ ಕೇಂದ್ರಗಳ ಮೂಲಕ ಕೂಡ ನಿಮ್ಮ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ (Pahani Link To Aadhar Card) ಮಾಡಿಕೊಳ್ಳಬಹುದು.

Pahani Link To Aadhar Card ಅಗತ್ಯ ದಾಖಲೆಗಳು:

  • ಪಹಣಿ (RTC)
    ಆಧಾರ್ ಕಾರ್ಡ್
    ಮೊಬೈಲ್ ಫೋನ್

RTC Aadhar Link ವೆಬ್‌ಸೈಟ್:

Aadhar Link To Land Records Karnataka ವೆಬ್‌ಸೈಟ್‌:‌ ಲಿಂಕ್ ಮಾಡಿ
ಅಧಿಕೃತ ವೆಬ್‌ಸೈಟ್‌:‌ landrecords.karnataka.gov.in/service4/

ಇದೆ ರೀತಿಯ Latest ಮಾಹಿತಿ ಪಡೆಯಲು ನಮ್ಮ WhatsApp Group ಗೆ Join ಆಗಿ ಹಾಗೂ ನಮ್ಮ ವೆಬ್‌ಸೈಟ್‌ ನೋಟಿಫಿಕೇಶನ್‌ ಆನ್‌ ಮಾಡಿಕೊಳ್ಳಿ.

ಇತರೆ ಮಾಹಿತಿಗಳನ್ನು ಓದಿ:

Crop Insurance Karnataka: ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಆರಂಭ

ರೇಷನ್‌ ಕಾರ್ಡ್‌ Status Check ಮಾಡಿ

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು ಗೊತ್ತಾ..?

ಬೆಳೆ ಪರಿಹಾರ ಜಮಾ ಮೊಬೈಲ್‌ನಲ್ಲೇ Status Check ಮಾಡಿ

ಗೃಹಲಕ್ಷ್ಮೀ ಯೋಜನೆಯ 2000 ರೂ. ಹಣ ಬಂದಿಲ್ಲವೇ..? ಸರ್ಕಾರದಿಂದ ಹೊಸ ಅಪಡೇಟ್‌

ಅನ್ನಭಾಗ್ಯ ಹಣ ನಿಮಗೆ ಜಮಾ ಆಗಿಲ್ಲವೇ?, ಇಲ್ಲಿದೆ ಹೊಸ Update

2 thoughts on “RTC Aadhar Link 2024: ಮೊಬೈಲ್‌ನಲ್ಲೇ ಜಮೀನಿನ ಪಹಣಿ + ಆಧಾರ್ ಕಾರ್ಡ್ ಲಿಂಕ್‌ ಮಾಡಿ, ಇಲ್ಲಿದೆ ಸುಲಭ ವಿಧಾನ”

Leave a Comment

error: Content is protected !!