ಎಲ್ಲರಿಗೂ ನಮಸ್ಕಾರ, ಸರ್ಕಾರವು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರ ಸರ್ಕಾರವು ಮಹಿಳಿಯರಿಗೆ 3 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ (Udyogini Scheme) ಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಬೇಕಾಗುವ ದಾಖಲೆಗಳೆನು..? ಯಾವ ಅರ್ಹತೆಯನ್ನು ಹೊಂದಿರಬೇಕು ಎಂಬುದನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ಮಹಿಳೆಯರು ವ್ಯಾಪಾರ, ಸಣ್ಣ ಉದ್ಯಮಗಳನ್ನು ಪ್ರಾರಂಭ ಮಾಡಲು ಹಣಕಾಸಿನ ತೊಂದರೆ ಉಂಟಾಗುತ್ತದೆ. ಅಂತಹವರಿಗೆ ಕೇಂದ್ರ ಸರ್ಕಾರವು ಬಡ್ಡಿ ರಹಿತ ಸಾಲ ನೀಡುವ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಹಿಳೆಯರು 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು.
ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದು ಹಿಂದುಳಿದ ಪ್ರದೇಶಗಳ ಮಹಿಳೆಯರನ್ನು ಉದ್ಯಮಿಗಳಾಗಲು ಪ್ರೇರೇಪಿಸುತ್ತದೆ. ಮಹಿಳೆಯರು ಸ್ವಂತ ಉದ್ಯೋಗ ಮಾಡಲು ನೇರವಾಗಿದೆ.
ಉದ್ಯೋಗಿನಿ ಯೋಜನೆಯನ್ನು ಮೊದಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ, ನಂತರ ಕೇಂದ್ರ ಸರ್ಕಾರವು ‘ಮಹಿಳಾ ಅಭಿವೃದ್ಧಿ ನಿಗಮ’ದ ಮೇಲ್ವಿಚಾರಣೆಯಲ್ಲಿ ದೇಶಾದ್ಯಂತ ಇದನ್ನು ಜಾರಿಗೆ ತರುತ್ತಿದೆ. ಈ ಯೋಜನೆಯ ಅಡಿಯಲ್ಲಿ ಸಾವಿರಾರು ಮಹಿಳೆಯರು ಲಾಭ ಪಡೆದುಕೊಂಡಿದ್ದಾರೆ.
ಉದ್ಯೋಗಿನಿ ಯೋಜನೆ (Udyogini Scheme) ಅಡಿಯಲ್ಲಿ ಮಹಿಳೆಯರು 3 ಲಕ್ಷದವರೆಗೆ ಸಾಲ ಪಡೆಯಬಹುದು. ಅಲ್ಲದೇ ಅಂಗವಿಕಲರು, ವಿಧವೆಯರು ಮತ್ತು ದಲಿತ ಮಹಿಳೆಯರಿಗೆ ಸಂಪೂರ್ಣ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಇತರೆ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಶೇಕಡಾ 10 ರಿಂದ 12 ರಷ್ಟು ಬಡ್ಡಿಗೆ ಸಾಲ ನೀಡಲಾಗುತ್ತದೆ.
ಈ ಬಡ್ಡಿಯು ಬ್ಯಾಂಕ್ ಅನ್ನು ಅವಲಂಬಿಸಿ ಬದಲಾಗುತ್ತದೆ. ಅಲ್ಲದೇ, ಕುಟುಂಬದ ವಾರ್ಷಿಕ ಆದಾಯವನ್ನು ಅವಲಂಬಿಸಿ ಶೇಕಡಾ 30 ರವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಸರಕಾರ ಸೂಚಿಸುವ 88 ಬಗೆಯ ವ್ಯವಹಾರಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಅಂಗವಿಕಲರು ಮತ್ತು ವಿಧವೆ ಮಹಿಳೆಯರಿಗೆ ಸಾಲದ ಮಿತಿ ಇರುವುದಿಲ್ಲ. ಅವರ ವಿದ್ಯಾರ್ಹತೆ ಮತ್ತು ವ್ಯವಹಾರವನ್ನು ಅವಲಂಬಿಸಿ ಅವರು ಹೆಚ್ಚಿನ ಸಾಲಗಳನ್ನು ಪಡೆದುಕೊಳ್ಳಬಹುದು.
Udyogini Scheme Karnataka ಅರ್ಹತೆಗಳು:
- ಭಾರತೀಯರಾಗಿರಬೇಕು.
- 18 ರಿಂದ 55 ವರ್ಷದೊಳಗಿನ ಮಹಿಳೆಯರು ಅರ್ಹರು.
- ಕುಟುಂಬದ ವಾರ್ಷಿಕ ಆದಾಯ 1,50,000 ರೂ. ಮೀರಬಾರದು.
- ಅರ್ಜಿದಾರರ ಸಾಲದ ಮೊತ್ತವು 3,00,000 ರೂ ಮೀರಬಾರದು.
- ಉದ್ಯೋಗಿ ಸಾಲದ ಮೇಲೆ ಯಾವುದೇ ಭದ್ರತೆಯ ಅಗತ್ಯವಿಲ್ಲ.
- ಕುಟುಂಬದ ವಾರ್ಷಿಕ ಆದಾಯ, ಅಂಗವಿಕಲರು ಅಥವಾ ವಿಧವೆಯರಿಗೆ ವಯಸ್ಸಿನ ಮಿತಿಯಿರುವುದಿಲ್ಲ.
- ಅರ್ಜಿದಾರರ ಕ್ರೆಡಿಟ್ ಸ್ಕೋರ್ ಮತ್ತು CIBIL ಸ್ಕೋರ್ ಉತ್ತಮವಾಗಿರಬೇಕು.
- ಈ ಹಿಂದೆ ಪಡೆದಿರುವ ಸಾಲ ಮರುಪಾವತಿ ಮಾಡದೆ ಇದ್ದಲ್ಲಿ ಸಾಲವನ್ನು ನೀಡುವುದಿಲ್ಲ.
Udyogini Scheme ಅಗತ್ಯ ದಾಖಲೆಗಳು:
- ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಭರ್ತಿ ಮಾಡಿರುವ ಅರ್ಜಿ.
- ಆಧಾರ್ ಕಾರ್ಡ್, ಅರ್ಜಿ ಸಲ್ಲಿಸುವ ಮಹಿಳೆಯ ಜನನ ಪ್ರಮಾಣಪತ್ರ.
- ರೇಷನ್ ಕಾರ್ಡ್ ಪ್ರತಿ.
- ಆದಾಯ ಪ್ರಮಾಣ ಪತ್ರ.
- ನಿವಾಸದ ಪುರಾವೆ.
- ಜಾತಿ ದೃಢೀಕರಣ ಪ್ರಮಾಣಪತ್ರ.
- ಬ್ಯಾಂಕ್ ಖಾತೆ ವಿವರ.
ಅರ್ಜಿ ಸಲ್ಲಿಸುವ ವಿಧಾನ:
- ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್‌ಗೆ ಹೋಗಿ ಅರ್ಜಿ ನಮೂನೆಯನ್ನು ತೆಗೆದುಕೊಳ್ಳಬೇಕು.
- ಅಗತ್ಯವಿರುವ ವಿವರಗಳನ್ನು ನಮೂದಿಸಿ ಅಪ್ಲಿಕೇಶನ್ ಅನ್ನು ಭರ್ತಿ ಮಾಡಬೇಕು.
- ಫಾರ್ಮ್‌ನಲ್ಲಿ ನಮೂದಿಸಲಾದ ಎಲ್ಲಾ ದಾಖಲೆಗಳ ಫೋಟೋಕಾಪಿಯನ್ನು ಲಗತ್ತಿಸಿಬೇಕು.
- ಭರ್ತಿ ಮಾಡಿ ಫಾರ್ಮ್ ಅನ್ನು ಬ್ಯಾಂಕ್‌ಗೆ ಸಲ್ಲಿಸಿ.
- ಅರ್ಜಿ ಸಲ್ಲಿಸಿದ ನಂತರ, ಸಾಲ ಮಂಜೂರಾತಿಗಾಗಿ ನೀವು ನಿಯಮಿತವಾಗಿ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬೇಕು
ಇತರೆ ಮಾಹಿತಿಗಳನ್ನು ಓದಿ:
ಗೃಹಲಕ್ಷ್ಮಿ DBT Status Check ಮಾಡಿ
ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ
ಹೆಚ್ಎಸ್ಆರ್’ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಕಾಲಾವಧಿ ವಿಸ್ತರಣೆ
ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಆರಂಭ
Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ