ವಿವೋ ಕಂಪನಿಯು ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ವಿವೋ ಕಂಪನಿ ತನ್ನ ಲೇಟೆಸ್ಟ್ Vivo Y200 Pro 5G ಅನ್ನು ಬಿಡುಗಡೆ ಮಾಡಲಾಗಿದೆ. ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿದೆ. ಈ ಪೋನ್ ನಲ್ಲಿ ಎರಡು ಬಣ್ಣಗಳ ಆಯ್ಕೆ ಇರಲಿದೆ. ಯಾವೇಲ್ಲಾ ಪೀಚರ್ಸ್ ಗಳನ್ನು ಒಳಗೊಂಡಿದೆ ಎಂಬುದನ್ನು ಈ ಲೇಖನದಲ್ಲಿ ನೀಡಲಿದ್ದೇವೆ.
ವಿಶೇಷತೆಗಳು:
Vivo Y200 Pro 5G ಸ್ಮಾರ್ಟ್‌ಫೋನ್ ನಲ್ಲಿ 6.78 ಇಂಚಿನ ಪೂರ್ಣ HD+ ಕರ್ವ್ AMOLED ಡಿಸ್ಕ್ ಜೊತೆಗೆ 1080×2400 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದರ ಡಿಸ್ಪ್ಲೇ 1300 ನಿಟ್‌ಗಳ ಗರಿಷ್ಠ ಹೊಳಪಿನ ಮಟ್ಟವನ್ನು ಹೊಂದಿದೆ ಮತ್ತು 120Hz ವರೆಗೆ ರಿಫ್ರೆಶ್ ದರವನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಚಿಪ್‌ಸೆಟ್‌ನೊಂದಿಗೆ ಕರ್ವ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಷಾ-ಕೋರ್ ಕ್ವಾಲ್ಕಾಮ್ ಸ್ಟಾಪ್‌ಡ್ರಾಗನ್ 695 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇರಲಿದೆ. ಹಾಗೂ ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ.
ಕ್ಯಾಮೆರಾ ಮಾಹಿತಿ:
ಈ ಮೊಬೈಲ್ ನಲ್ಲಿ ಡುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೇಲ್ಪಿ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಬ್ಯಾಟರಿ ಹಾಗೂ ಬಣ್ಣ:
ಈ ಸ್ಮಾರ್ಟ್‌ಫೋನ್ ನಲ್ಲಿ 5000mAh ಬ್ಯಾಟರಿಯನ್ನು ನೀಡಲಾಗಿದೆ. ಹಾಗೂ 44W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಸಿಲ್ಕ್ ಗ್ರೀನ್ (Silk Green) ಮತ್ತು ಸಿಲ್ಕ್ ಬ್ಲ್ಯಾಕ್ (Silk Black) ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.
ಸ್ಮಾರ್ಟ್‌ಫೋನ್ ಅಳತೆ 164.42 x 74.92 x 7.49mm (ಎತ್ತರ x ಅಗಲ x ದಪ್ಪ) ಮತ್ತು 172.00 ಗ್ರಾಂ ಇದೆ. ಇದು ಧೂಳು ಮತ್ತು ನೀರಿನ ರಕ್ಷಣೆಗಾಗಿ IP54 ರೇಟಿಂಗ್ ಅನ್ನು ಹೊಂದಿದೆ. ಹಾಗೂ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇರಲಿದೆ.
Vivo Y200 Pro 5G ಬೆಲೆ:
Vivo Y200 Pro 5G ಸ್ಮಾರ್ಟ್‌ಫೋನ್ 8GB RAM, 128GB Storage ನ ಬೆಲೆ 24,999 ರೂ. ಇರಲಿದೆ. ಈ ಪೋನ್ Amazon, Flipkart ಹಾಗೂ Vivo ಕಂಪನಿಯು ವೆಬ್ ಸೈಟ್ ಗಳಲ್ಲಿ ಲಭ್ಯವಿರುತ್ತದೆ.
ಇತರೆ ಮಾಹಿತಿಗಳನ್ನು ಓದಿ:
120W Super ಪಾಸ್ಟ್ ಚಾರ್ಜಿಂಗ್ 5,500mAh ಬ್ಯಾಟರಿಯೊಂದಿಗೆ Realme GT 6T ಮಾರುಕಟ್ಟೆಗೆ ಎಂಟ್ರಿ