ವಿವೋ ಕಂಪನಿಯು ಶೀಘ್ರದಲ್ಲೇ ತನ್ನ ಹೊಸ ಸ್ಮಾರ್ಟ್‌ಫೋನ್ Vivo Y300 Pro 5G ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಸ್ಮಾರ್ಟ್ ಫೋನ್ ಹಿಂದೆ ಬಿಡುಗಡೆ ಮಾಡಿದ್ದ Vivo Y200 Pro 5G ಅನ್ನು ಹೋಲುತ್ತದೆ, ಆದರೆ ಕೆಲವು ಹೆಚ್ಚುವರಿ ಫೀಚರ್ಸ್‌ಗಳನ್ನು ಹೊಂದಿದೆ.
ಈ ಸ್ಮಾರ್ಟ್ ಫೋನ್ ಮಧ್ಯಮ ಶ್ರೇಣಿಯಲ್ಲಿ ಲಾಂಚ್ ಆಗಬಹುದು. ಕಂಪನಿಯ ಯಾವೇಲ್ಲಾ ಬದಲಾವಣೆ ಮಾಡಿದೆ ಎಂಬುದನ್ನು ಪೋನ್ ಲಾಂಚ್ ಆದ ನಂತರ ತಿಳಿಯುವುದು.
Vivo Y300 Pro 5G:
ವಿವೋ Y300 Pro 5G ನಲ್ಲಿ Snapdragon 6 Gen 1 ಪ್ರೊಸೆಸರ್ ಅನ್ನು ಬಳಸಲಾಗಿದೆ, ಇದು ಹೆಚ್ಚಿನ ವೇಗ ಮತ್ತು ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.
44W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5,500mAh ಬ್ಯಾಟರಿಯನ್ನು ಹೊಂದಿದೆ, ಇದು ದೀರ್ಘಕಾಲದ ಬ್ಯಾಟರಿ ಆಯಸ್ಸನ್ನು ಭರವಸೆ ನೀಡುತ್ತದೆ.
ಈ ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ 50MP ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಇದೆ, ಇದು ಸುಧಾರಿತ ಫೋಟೋಗ್ರಫಿ ಅನುಭವವನ್ನು ಒದಗಿಸುತ್ತದೆ. ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಇರುವುದರಿಂದ ಸೆಲ್ಫಿ ಪ್ರಿಯರಿಗೆ ಇದು ತುಂಬಾ ಆಕರ್ಷಕವಾಗಿರುತ್ತದೆ.
ವಿವೋ Y300 Pro 5G ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಂಡಿದ್ದು, ವಿವಿಧ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು ಸಹಾಯಕವಾಗಿದೆ.
ಇದರ ಮುಖಾಂತರ ಉತ್ತಮ ಗುಣಮಟ್ಟದ ಚಿತ್ರಗಳು ಮತ್ತು ವೀಡಿಯೋಗಳನ್ನು ತೆಗೆದುಕೊಳ್ಳಬಹುದು. ಈ ಫೋನ್ ಬಗ್ಗೆ ಇನ್ನಷ್ಟು ವಿವರಗಳು ಶೀಘ್ರದಲ್ಲೇ ಲಭ್ಯವಾಗಲಿದೆ.
ಇತರೆ ಮಾಹಿತಿಗಳನ್ನು ಓದಿ:
Vivo X Fold 3 Pro: ಜೂನ್ 6 ರಂದು ವಿವೋ X ಫೋಲ್ಡ್ 3 ಪ್ರೋ ಬಿಡುಗಡೆ