ಎಲ್ಲರಿಗೂ ನಮಸ್ಕಾರ, ವಿವೋ ಕಂಪನಿಯು vivo Y58 5G ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಜೂನ್ 20 ರಂದು ಬಿಡುಗಡೆ ಮಾಡಿದೆ. ಭಾರತದಲ್ಲಿ ವಿವೋ ಕಂಪನಿಯು ತನ್ನದೆಯಾದ ಗ್ರಾಹಕ ಬಳಗವನ್ನು ಹೊಂದಿದೆ.
Vivo ಕಂಪನಿಯು ‘Y’ ಸರಣಿಯ Y58 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಯಾವ ತರಹದ ಹೊಸ ಹೊಸ ಪೀಚರ್ಸ ಗಳನ್ನು ನೀಡಿದೆ ಎಂಬುದನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
Vivo Y58 5G ಪೋನ್ ನ ವಿಶೇಷತೆಗಳು:
6.72-ಇಂಚಿನ 120Hz LCD ಸ್ಕ್ರೀನ್ ಜೊತೆಗೆ ಪೂರ್ಣ-HD+ ಡಿಸ್ಪ್ಲೇಯನ್ನು ಹೊಂದಿದೆ. 1024 nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಸ್ನಾಪ್‌ಡ್ರಾಗನ್ 4 Gen 2 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕ, ಡ್ಯುಯಲ್ ಸ್ಪೀಕರ್‌ಗಳು ಮತ್ತು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP64 ರೇಟಿಂಗ್‌ನ್ನು ಹೊಂದಿದೆ.
ಕ್ಯಾಮೆರಾ ಮಾಹಿತಿ:
Vivo Y58 5G ಸ್ಮಾರ್ಟ್ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ 50ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರಾ ಇದೆ. ಹಾಗೂ 2-ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ. ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೇಲ್ಪಿ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮಾಹಿತಿ:
Y58 5G ಫೋನ್ ನಲ್ಲಿ ಕಂಪನಿಯು 6,000mAh ಬ್ಯಾಟರಿಯನ್ನು ನೀಡಿದೆ. 44W fast ಚಾರ್ಜಿಂಗ್ ಸೌಲಭ್ಯವನ್ನು ಕಂಪನಿಯು ತನ್ನ ಗ್ರಾಹಕರಿಗೆ ನೀಡಿದೆ.
8GB RAM, 128GB ಸ್ಟೋರೇಜ್ ನ ಬೆಲೆ: 19,499 ರೂ. ಇರಲಿದೆ. Sundarbans Green ಮತ್ತು Himalayan Blue ಈ ಎರಡು ಬಣ್ಣಗಳ ಆಯ್ಕೆಯನ್ನು ಹೊಂದಿದೆ.
ಇತರೆ ಮಾಹಿತಿಗಳನ್ನು ಓದಿ: