ಸಂತೂರ್ ವಿದ್ಯಾರ್ಥಿವೇತನ 2025: ಪದವಿ ವಿದ್ಯಾರ್ಥಿಗಳಿಗೆ 30,000 ರೂ. ಸ್ಕಾಲರ್‌ಶಿಪ್‌ | Santoor Scholarship 2025-26 Apply Online @buddy4study.com

By: Manjunath Pujari

On: Saturday, October 25, 2025 2:24 PM

Santoor Scholarship 2025 Apply Online
Google News
Follow Us
Telegram Group Join Now
WhatsApp Group Join Now

ವಿಪ್ರೋ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್ ಗ್ರೂಪ್ (WCCLG) ಹಾಗೂ ವಿಪ್ರೋ ಕೇರ್ಸ್ ವತಿಯಿಂದ ನೀಡಲಾಗುವ 2025-26 ನೇ ಸಾಲಿನ ಸಂತೂರ್ ವಿದ್ಯಾರ್ಥಿವೇತನಕ್ಕೆ (Santoor Scholarship 2025) ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದೆ.

2016-17 ರಲ್ಲಿ ಸಂತೂರ್ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಾರಂಭವಾಯಿತು. ಇದು ವಿಪ್ರೋ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್ ಗ್ರೂಪ್ (WCCLG) ಮತ್ತು ವಿಪ್ರೋ ಕೇರ್ಸ್‌ನ ಜಂಟಿ ಉಪಕ್ರಮವಾಗಿದ್ದು, 12 th ತರಗತಿಯ ನಂತರ ಉನ್ನತ ಶಿಕ್ಷಣವನ್ನು ಮುಂದುವರೆಸಲು ಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡುವ ಗುರಿಯನ್ನು ಈ ವಿದ್ಯಾರ್ಥಿವೇತನ ಹೊಂದಿದೆ.

ಈ ಯೋಜನೆ, ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಮುಂದುವರಿಸಲು ನೆರವಾಗುವ ಉದ್ದೇಶ ಹೊಂದಿದೆ. ಕಳೆದ ಒಂಬತ್ತು ವರ್ಷಗಳಲ್ಲಿ, ವಿಜ್ಞಾನ, ವಾಣಿಜ್ಯ, ಕಲೆ (ಮಾನವಿಕ), ಎಂಜಿನಿಯರಿಂಗ್, ವೈದ್ಯಕೀಯ, ವ್ಯವಹಾರ ಅಧ್ಯಯನ, ಆರೋಗ್ಯ ರಕ್ಷಣೆ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ 8,000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನದ ಪ್ರಯೋಜನ ಪಡೆದಿದ್ದಾರೆ.

ಪದವಿ ಕೋರ್ಸ್‌ನಲ್ಲಿ ಅಧ್ಯಯನ ಮಾಡುತ್ತಿರುವ ಯುವತಿಯರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಅರ್ಹ ವಿದ್ಯಾರ್ಥಿನಿಯರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಈ ವಿದ್ಯಾರ್ಥಿವೇತನದ ಸದುಪಯೋಗ ಮಾಡಿಕೊಳ್ಳಬಹುದು.

Santoor Scholarship 2025 ಅರ್ಹತೆಗಳು:

  • 2024–25 ನೇ ಶೈಕ್ಷಣಿಕ ವರ್ಷದಲ್ಲಿ 12ನೇ ತರಗತಿ ಪೂರೈಸಿರಬೇಕು.
  • ಸ್ಥಳೀಯ ಸರಕಾರಿ ಶಾಲೆಯಿಂದ 10ನೇ ತರಗತಿ ಪಾಸಾಗಿರಬೇಕು.
  • ಪದವಿ (Degree) ಕೋರ್ಸ್‌ನ ಮೊದಲನೇ ವರ್ಷದಲ್ಲಿ ದಾಖಲಾಗಿರಬೇಕು.
  • Buddy4Study, Wipro ಮತ್ತು Santoor ನ ನೌಕರರ ಪುತ್ರಿಯರು ಅರ್ಹರಲ್ಲ.
  • ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಯುವತಿಯರಿಗೆ ಅವಕಾಶ.

ಪ್ರಯೋಜನಗಳು:

  • ₹30,000 ಸ್ಕಾಲರ್‌ಶಿಪ್ (ಒಮ್ಮೆ ನೀಡುತ್ತಾರೆ)
  • ಹಣವನ್ನು ಕಾಲೇಜು ಶುಲ್ಕ, ವಸತಿ, ಪುಸ್ತಕ, ಪ್ರಯಾಣ ಅಥವಾ ಇತರ ಶಿಕ್ಷಣ ಸಂಬಂಧಿತ ವೆಚ್ಚಗಳಿಗೆ ಬಳಸಬಹುದು.

Santoor Scholarship 2025 ಅಗತ್ಯ ದಾಖಲೆಗಳು:

  • 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳು
  • ಕಾಲೇಜು ಪ್ರವೇಶ ಪುರಾವೆ / ಐಡಿ ಕಾರ್ಡ್
  • ಪಾಸ್‌ಪೋರ್ಟ್ ಗಾತ್ರದ ಇತ್ತೀಚಿನ ಫೋಟೋ
  • ಗುರುತಿನ ಪುರಾವೆ (ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿ)
  • ಪಾಸ್‌ ಬುಕ್‌ ಫೋಟೋ ಕಾಪಿ (ಗ್ರಾಮೀಣ ಬ್ಯಾಂಕ್ ಹೊರತುಪಡಿಸಿ)

Santoor Scholarship 2025-26 Last Date:
ಸಂತೂರ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-10-2025

ಪ್ರಮುಖ ಲಿಂಕ್’ಗಳು:
Apply Online ಲಿಂಕ್:‌ Apply ಮಾಡಿ

ಇನ್ಫೋಸಿಸ್ ವಿದ್ಯಾರ್ಥಿವೇತನ 2025

For Feedback - feedback@example.com

Leave a Comment