Gruhalakshmi Scheme: ದೀಪಾವಳಿ ಹಬ್ಬಕ್ಕೆ ಗೃಹಲಕ್ಷ್ಮೀಯರಿಗೆ ಭರ್ಜರಿ ಗಿಫ್ಟ್; ಯಜಮಾನಿಯರ ಖಾತೆಗೆ 2,000 ರೂ. ಜಮಾ

By: ವಿಜಯಲಕ್ಷ್ಮಿ ಪೂಜಾರಿ

On: Monday, October 20, 2025 4:23 PM

Gruhalakshmi Scheme DBT Check
Google News
Follow Us
Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್, ದೀಪಾವಳಿ ಹಬ್ಬಕ್ಕೆ ಗೃಹಲಕ್ಷ್ಮೀಯರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್. ಗೃಹಲಕ್ಷ್ಮೀ ಯೋಜನೆಯ (Gruhalakshmi Scheme) ಹಣ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದ್ದ ಯಜಮಾನಿಯರ ಖಾತೆಗೆ 2,000 ರೂ. ಜಮಾ ಆಗಿದೆ.

ಜುಲೈ ತಿಂಗಳಿನ‌ ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ಹಣ ಅಗಸ್ಟ್ ತಿಂಗಳಿನಲ್ಲಿ ಜಮಾ ಆಗಿತ್ತು. ಇಂದು (20-10-2025) ರಂದು ಆಗಸ್ಟ್ ತಿಂಗಳಿನ 2,000 ರೂ. ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಂದಾಯವಾಗಿದೆ.

ಗೃಹಲಕ್ಷ್ಮಿ ಯೋಜನೆಯ ಹಣವನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದರು. ಅದರಂತೆ ಇಂದು‌ ಸರ್ಕಾರದಿ ಹಣ ಜಮಾ ಮಾಡಿದ್ದಾರೆ.

Gruhalakshmi Scheme- ಗೃಹಲಕ್ಷ್ಮಿ ಯೋಜನೆಗೆ 2 ವರ್ಷ ಪೂರೈಕೆ:

ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ 24 ಕಂತುಗಳ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಆಗಸ್ಟ್‌ ಕಂತು ಬಿಡುಗಡೆಯಾಗಿದ್ದು, ಒಟ್ಟು 24 ತಿಂಗಳ, ಅಂದರೆ ಎರಡು ವರ್ಷಗಳ ಪಾವತಿ ಪೂರ್ಣಗೊಂಡಿದೆ. ಯೋಜನೆ ಆರಂಭವಾದಾಗಿನಿಂದ ತಿಂಗಳಿಗೆ 2000 ರೂ. ರಂತೆ ನೀಡಲಾಗುತ್ತಿರುವುದರಿಂದ, ಪ್ರತಿಯೊಬ್ಬ ಫಲಾನುಭವಿಗೂ ಇದುವರೆಗೆ ಸುಮಾರು 46 ಸಾವಿರ ರೂ. ಲಭ್ಯವಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಂತ್ರಿಕ ವ್ಯತ್ಯಯ – ಶೀಘ್ರ ಪರಿಹಾರ ಭರವಸೆ:
ಕೆಲವು ಜಿಲ್ಲೆಗಳಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ಹಣ ಖಾತೆಗಳಿಗೆ ತಡವಾಗಿ ತಲುಪಿದೆ. ಆದರೆ ಬಾಕಿಯಿರುವ ಕಂತುಗಳನ್ನು ಒಟ್ಟಿಗೆ ಜಮೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಎಲ್ಲ ಫಲಾನುಭವಿಗಳಿಗೂ ಶೀಘ್ರದಲ್ಲೇ ಬಾಕಿ ಮೊತ್ತ ತಲುಪಲಿದೆ,” ಎಂದುಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಹಣವು ಜಮಾ ಆಗಿದ್ದು, ನಿಮ್ಮ‌ ಖಾತೆಗೂ ಜಮಾ‌ ಆಗಿದೆಯಾ ಎಂದು DBT Status ಚೆಕ್ ಮಾಡಿಕೊಳ್ಳಬಹುದು.

Gruhalakshmi Scheme DBT Status Check

Today Gold Rate: ದೀಪಾವಳಿ ಹಬ್ಬಕ್ಕೆ ಗುಡ್‌ ನ್ಯೂಸ್; ಚಿನ್ನದ ಬೆಲೆ ಇಳಿಕೆ

For Feedback - feedback@example.com

Leave a Comment