ಎಲ್ಲರಿಗೂ ನಮಸ್ಕಾರ, ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್, ಪಡಿತರ ಚೀಟಿ ಇರುವವರಿಗೆ ಪ್ರತಿ ತಿಂಗಳು ಉಚಿತವಾಗಿ ಪಡಿತರ ದೊರೆಯುತ್ತದೆ. ಸರ್ಕಾರವು ಉಚಿತವಾಗಿ ನೀಡುತ್ತಿರುವ ಅಕ್ಕಿಯು ಕಾಳ ಸಂತೆಯಲ್ಲಿ ಮಾರಾಟವಾಗುವುದನ್ನು ನಿಲ್ಲಿಸಲು ಸರ್ಕಾರ ಇಂದಿರಾ ಕಿಟ್ ವಿತರಣೆ ಮಾಡಲು ಮುಂದಾಗಿದೆ.
ಯಾರಿಗೆಲ್ಲ ಇಂದಿರಾ ಕಿಟ್ ದೊರೆಯಲಿದೆ..?
BPL ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಇಂದಿರಾ ಕಿಟ್ ವಿತರಣೆ ಮಾಡುತ್ತಾರೆ.
ಇಂದಿರಾ ಕಿಟ್ ನಲ್ಲಿ ಏನೆಲ್ಲಾ ಇರಲಿದೆ..?
- ತೊಗರಿ ಬೇಳೆ – 1 Kg
- ಹೆಸರುಕಾಳು- 1 Kg
- ಅಡುಗೆ ಎಣ್ಣೆ – 1 ಲೀಟರ್
- ಸಕ್ಕರೆ – 1 Kg
- ಉಪ್ಪು- 1 Kg
10 Kg ಅಕ್ಕಿ ಬದಲು 5Kg ಅಕ್ಕಿ ಹಾಗೂ ಇಂದಿರಾ ಕಿಟ್ ನೀಡಲು ಸರ್ಕಾರ ನಿರ್ಧರಿಸಿದೆ. ಒಬ್ಬರು ಅಥವಾ ಇಬ್ಬರು ಇರುವ ಕುಟುಂಬಕ್ಕೆ ತಲಾ ಅರ್ಧ ಕೆ.ಜಿ ಯಂತೆ 2.5Kg ಕಿಟ್ ವಿತರಣೆ.
ಮೂರು ಅಥವಾ ನಾಲ್ಕು ಜನ ಇರುವ ಕುಟುಂಬಕ್ಕೆ 5 Kg ತೂಕದ ಇಂದಿರಾ ಕಿಟ್ ವಿತರಣೆ. ಐದು ಜನ ಅಥವಾ ಅದಕ್ಕಿಂತ ಹೆಚ್ಚು ಜನರು ಇರುವ ಕುಟುಂಬಕ್ಕೆ ತಲಾ 1.5 ಕೆ.ಜಿ ಯಂತೆ 7.5 ಕೆ.ಜಿಯ ಆಹಾರ ಕಿಟ್ ವಿತರಣೆ.
ಇತರೆ ಮಾಹಿತಿಗಳನ್ನು ಓದಿ:
Gruhalakshmi Scheme: ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್; ಯಜಮಾನಿಯರ ಖಾತೆಗೆ 2,000 ರೂ. ಜಮಾ
Today Gold Rate: ದೀಪಾವಳಿ ಹಬ್ಬಕ್ಕೆ ಗುಡ್ ನ್ಯೂಸ್; ಚಿನ್ನದ ಬೆಲೆ ಇಳಿಕೆ

